
Pulse of the Public
ಕಾಲ್ಪನಿಕ ಚಿತ್ರಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯ ಸಬಲತೆಯನ್ನು ಗುರುತಿಸಿರುವ ಮೂಡೀಸ್ ರೇಟಿಂಗ್ಸ್, 2026-27ನೇ ಹಣಕಾಸು ವರ್ಷದ ಭಾರತದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಶೇ. 6 ರಿಂದ ಶೇ. 7ಕ್ಕೆ ಏರಿಸಿದೆ.
ಭಾರತ ಮತ್ತು ದಕ್ಷಿಣ ಅಮೆರಿಕದ ಪ್ರಮುಖ ವ್ಯಾಪಾರ ಒಕ್ಕೂಟವಾದ ಮರ್ಕೋಸುರ್ ತಮ್ಮ ವ್ಯಾಪಾರ ಒಪ್ಪಂದವನ್ನು ವಿಸ್ತರಿಸಲು ಚರ್ಚೆ ಆರಂಭಿಸಿದ್ದು, ಕಾಗದರಹಿತ ವ್ಯಾಪಾರಕ್ಕೆ ಅನುಕೂಲವಾಗುವಂತೆ ಇ-ಪ್ರಮಾಣಪತ್ರ ಪ್ರೋಟೋಕಾಲ್ಗೆ ಸಹಿ ಹಾಕಿವೆ.
ರೈಡ್ ಕಾಯ್ದಿರಿಸುವಾಗ ಬಳಕೆದಾರರನ್ನು ದಾರಿ ತಪ್ಪಿಸುವ 'ಡಾರ್ಕ್ ಪ್ಯಾಟರ್ನ್' ಹಾಗೂ ಟಿಪ್ ಪಾವತಿಸುವಂತೆ ಒತ್ತಡ ಹೇರುವ ತಂತ್ರ ಬಳಸಿದ ಹಿನ್ನೆಲೆಯಲ್ಲಿ ರ್ಯಾಪಿಡೋ ಆಪ್ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ₹10 ಲಕ್ಷ ದಂಡ ವಿಧಿಸಿದೆ.
ನವದೆಹಲಿಯಲ್ಲಿ ಭಾರತ ಮತ್ತು ಕೆನಡಾ ನಡುವೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (CEPA) ನಾಲ್ಕನೇ ಹಂತದ ಮಾತುಕತೆಗಳು ಅಧಿಕೃತವಾಗಿ ಪ್ರಾರಂಭವಾಗಿವೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 50 ಶತಕೋಟಿ ಡಾಲರ್ಗೆ ಹೆಚ್ಚಿಸುವ ಗುರಿಯೊಂದಿಗೆ ಈ ವರ್ಷದ ಅಂತ್ಯದೊಳಗೆ ಒಪ್ಪಂದ ಪೂರ್ಣಗೊಳಿಸಲು ಚರ್ಚಿಸಲಾಗುತ್ತಿದೆ.