ಶಾಸನಬದ್ಧ ಶೈಕ್ಷಣಿಕ ಅರ್ಹತೆ ಇಲ್ಲದ ಶಾಲಾ-ಕಾಲೇಜು ಶಿಕ್ಷಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ
ಆರ್‌ಟಿಇ, ಎನ್‌ಸಿಟಿಇ ಮತ್ತು ಯುಜಿಸಿ ನಿಯಮಗಳಡಿ ಶಾಸನಬದ್ಧ ಅರ್ಹತೆ ಹೊಂದಿಲ್ಲದ ಶಿಕ್ಷಕರನ್ನು ಶಾಲಾ-ಕಾಲೇಜುಗಳಲ್ಲಿ ನೇಮಿಸಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅರ್ಹತೆಯಿಲ್ಲದ ಶಿಕ್ಷಕರನ್ನು ನೇಮಿಸುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೀವ್ರ ಧಕ್ಕೆ ತರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಪೀಠ ತಿಳಿಸಿದೆ.
