ಎರಡನೇ ಬರಪೀಡಿತ ಪಟ್ಟಿಯಿಂದಲೂ ಕಮಲನಗರ ತಾಲೂಕು ಕೈಬಿಟ್ಟು ಸರ್ಕಾರ: ರೈತರ ತೀವ್ರ ಆಕ್ರೋಶ
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಎರಡನೇ ಬರಪೀಡಿತ ತಾಲೂಕುಗಳ ಪಟ್ಟಿಯಿಂದಲೂ ಕಮಲನಗರ ತಾಲೂಕನ್ನು ಕೈಬಿಟ್ಟಿರುವುದಕ್ಕೆ ಸ್ಥಳೀಯ ನಾಯಕರು ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಮರು ಸಮೀಕ್ಷೆ ನಡೆಸಿ ಬರ ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ.
