
Pulse of the Public
ಕಾಲ್ಪನಿಕ ಚಿತ್ರಸಿರ್ಮಾ ಎಸ್ಜಿಎಸ್ ಟೆಕ್ನಾಲಜಿ ಮತ್ತು ಇಟಲಿಯ ಎಲಿಮಾಸ್ಟರ್ ಗ್ರೂಪ್ ಸಂಸ್ಥೆಗಳು ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ 20,000 ಚದರ ಅಡಿಯ ನೂತನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿವೆ.
ಆಪ್ಟಿಕಲ್ ತಂತ್ರಜ್ಞಾನ ತಯಾರಿಕೆಯನ್ನು ಹೆಚ್ಚಿಸುವ ಉದ್ದೇಶದ ₹70 ಕೋಟಿ ವೆಚ್ಚದ ಯೋಜನೆಗಾಗಿ ಅಭಿವೃದ್ಧಿ ಭಾಗಿದಾರನಾಗಿ ಬೆಂಗಳೂರು ಮೂಲದ ಅಡ್ವಾನ್ಸ್ಡ್ ಫೋಟೊನಿಕ್ಸ್ ಸಂಸ್ಥೆ 'ಒಲೀ.ಸ್ಪೇಸ್' ಕೇಂದ್ರ ಸರ್ಕಾರದಿಂದ ಆಯ್ಕೆಯಾಗಿದೆ.
ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಆಫ್ರಿಕನ್ ಯೂನಿಯನ್ ನಿಯೋಗಕ್ಕೆ ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಇ-ಆಡಳಿತ ಸಾಧನೆಗಳನ್ನು ಪ್ರದರ್ಶಿಸಿತು.
ಕರ್ನಾಟಕ ಸರ್ಕಾರದ ಈ-ಆಡಳಿತ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಮಾದರಿಯನ್ನು ಅಧ್ಯಯನ ಮಾಡಲು ಆಫ್ರಿಕನ್ ಒಕ್ಕೂಟದ ಉನ್ನತ ನಿಯೋಗ ಬೆಂಗಳೂರಿಗೆ ಭೇಟಿ ನೀಡಿದೆ. ಯುಎನ್ಡಿಪಿ ಬೆಂಬಲದೊಂದಿಗೆ ಆಗಮಿಸಿದ ಈ ತಂಡವು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸೇವೆಗಳ ಕುರಿತು ಪ್ರಮುಖ ಚರ್ಚೆ ನಡೆಸಿತು.