
Pulse of the Public
ಕಾಲ್ಪನಿಕ ಚಿತ್ರಅಫಜಲಪುರ ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್ನಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ತಾಲೂಕು ಘಟಕದ ವತಿಯಿಂದ ಸಮ್ಮೇಳನ ನಡೆಸಿ, ಟನ್ ಕಬ್ಬಿಗೆ ₹5,000 ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಲಾಯಿತು. ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ ಸರ್ಕಾರಗಳು ಕಾರ್ಯನಿರ್ವಹಿಸುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಹೊಳೆನರಸೀಪುರ ತಾಲೂಕಿನ ಕುಂಚೇವುಹೊಸಳ್ಳಿ ಗ್ರಾಮದಲ್ಲಿ ತಡರಾತ್ರಿ ವಾಸದ ಮನೆ ಅಂಗಳಕ್ಕೆ ನುಗ್ಗಿದ ಚಿರತೆಯೊಂದು ಕಟ್ಟಿಹಾಕಿದ್ದ ಎಮ್ಮೆ ಕರುವನ್ನು ಕೊಂದು ಹೊತ್ತೊಯ್ದಿದೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ದಾವಣಗೆರೆ ನಗರಕ್ಕೆ ಮಾತ್ರ ನೀರು ಹರಿಸಿ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಭಾಗದ ನಾಲೆಗಳಿಗೆ ಭದ್ರಾ ನೀರು ಬಿಡದಿರುವುದನ್ನು ಖಂಡಿಸಿ ಶಾಸಕ ಬಿ.ಪಿ. ಹರೀಶ್ ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ದುಷ್ಕರ್ಮಿಗಳು ಹೂವಿನ ಬೆಳೆ ರಕ್ಷಣಾ ಕವರ್ಗಳನ್ನು ಕತ್ತರಿಸಿ ನಾಶಪಡಿಸಿದ್ದಾರೆ. ರಕ್ಷಣೆ ನೀಡುತ್ತಿದ್ದ ₹50,000 ಮೌಲ್ಯದ ಶೇಡ್ನೆಟ್ ಕವರ್ ಹಾಳಾಗಿದ್ದು, ಯುವ ರೈತ ಜಿ.ಎಂ. ಸುಧಾಕರ್ ಕಂಗಾಲಾಗಿದ್ದಾರೆ.