ಜಮ್ಮು ಮತ್ತು ಕಾಶ್ಮೀರದ 3 ವರ್ಷಗಳ ಸೇವೆಯ ನಂತರ ಬೆಂಗಳೂರಿಗೆ ಮರಳಿದ 'ಬೆಂಗಳೂರು ಟೆರಿಯರ್ಸ್' ಪಡೆ
'ಬೆಂಗಳೂರು ಟೆರಿಯರ್ಸ್' ಎಂದೇ ಪ್ರಸಿದ್ಧವಾಗಿರುವ 106 ಇನ್‌ಫ್ಯಾಂಟ್ರಿ ಬಟಾಲಿಯನ್ (ಪ್ರಾದೇಶಿಕ ಸೇನೆ) ಪ್ಯಾರಾ ಪಡೆ, ಜಮ್ಮು ಮತ್ತು ಕಾಶ್ಮೀರದಲ್ಲಿ 3 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿ ಬೆಂಗಳೂರಿಗೆ ಮರಳಿದೆ. ಯೋಧರ ಶಿಸ್ತು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಪ್ರಶಂಸಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
