
Pulse of the Public
ಕಾಲ್ಪನಿಕ ಚಿತ್ರಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ಗಲಾಟೆ ಎಬ್ಬಿಸಿದ್ದ ಯಕ್ಸಂಬಾದ ಅನಿಲ ಪೂಜಾರಿಗೆ ಚಿಕ್ಕೋಡಿ ಜೆಎಂಎಫ್ಸಿ ನ್ಯಾಯಾಲಯ 50 ಸಸಿ ನೆಡುವ ವಿನೂತನ ಶಿಕ್ಷೆ ವಿಧಿಸಿದೆ. ತೀರ್ಪಿನಂತೆ ಆರೋಪಿಯು ತನ್ನ ಪತ್ನಿಯೊಂದಿಗೆ ಚಿಕ್ಕೋಡಿ ಕೋರ್ಟ್ ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ.
ಆಲೂರು ತಾಲూಕಿನ ಅಬ್ಬಾನ ಗ್ರಾಮದಲ್ಲಿನ 37 ಎಕರೆ ಜಮೀನಿಗೆ 82.71 ಲಕ್ಷ ರೂ. ಹೆಚ್ಚುವರಿ ಮುದ್ರಾಂಕ ಶುಲ್ಕ ಪಾವತಿಸುವಂತೆ ಹೊರಡಿಸಲಾಗಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ದಾಖಲೆಗಳಿಲ್ಲದೆ ಕೇವಲ ಭವಿಷ್ಯದ ವಾಣಿಜ್ಯ ಅಥವಾ ರೆಸಾರ್ಟ್ ಬಳಕೆಯ ಆಧಾರದ ಮೇಲೆ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ತೀರ್ಪು ನೀಡಿದ್ದಾರೆ.
2024ರಲ್ಲಿ ಕಳುವಾಗಿದ್ದ 1 ಕೆಜಿ ಚಿನ್ನ ಹಾಗೂ 36 ಲಕ್ಷ ರೂ. ನಗದನ್ನು ಪೊಲೀಸರು ರಿಕವರಿ ಮಾಡಿದ್ದರೂ ತಮಗೆ ಹಸ್ತಾಂತರಿಸಿಲ್ಲ ಎಂದು ಗದಗ ನಗರದ ಕುಟುಂಬವೊಂದು ಮಾಜಿ ಸಿಪಿಐ ವಿರುದ್ಧ ಆರೋಪಿಸಿದೆ.
ದೈವಸ್ಥಾನ ಕಳವು ಪ್ರಕರಣದಲ್ಲಿ ಕಳೆದ ಸುಮಾರು ಏಳು ವರ್ಷಗಳಿಂದ ತಲೆಮರೆಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ ೩೮ ವರ್ಷದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.