
Pulse of the Public
ಕಾಲ್ಪನಿಕ ಚಿತ್ರಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ಅಪ್ಡೇಟ್ ಬಿಡುಗಡೆ ಮಾಡಿದ್ದು, ಸಕ್ರಿಯವಾಗಿ ದುರುಪಯೋಗವಾಗುತ್ತಿದ್ದ ಎರಡು ಜೀರೋ-ಡೇ ಲೋಪಗಳು ಸೇರಿದಂತೆ 966 ಭದ್ರತಾ ನ್ಯೂನತೆಗಳನ್ನು ಸರಿಪಡಿಸಿದೆ.
ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್ಟೆಕ್ ಫೆಸ್ಟ್ 2026 ರಲ್ಲಿ ಯುಐಡಿಎಐ ಹೊಸ ಆಧಾರ್ ಮುಖ ಚಹರೆ ದೃಢೀಕರಣ ಎಸ್ಡಿಕೆ ಮತ್ತು ಸ್ಯಾಂಡ್ಬಾಕ್ಸ್ ಬಿಡುಗಡೆ ಮಾಡಿದೆ. ಈ ಉಪಕರಣಗಳು ಹಣಕಾಸು ಸಂಸ್ಥೆಗಳು ತಮ್ಮ ಮೊಬೈಲ್ ಆಪ್ಗಳಲ್ಲೇ ನೇರವಾಗಿ ಮುಖ ಆಧಾರಿತ ಇ-ಕೆವೈಸಿ ಸೌಲಭ್ಯವನ್ನು ಸಂಯೋಜಿಸಲು ಅನುವು ಮಾಡಿಕೊಡಲಿವೆ.
ಪಿಎಂ-ಕುಸುಮ್ ಯೋಜನೆಯ ಮುಂದಿನ ಹಂತದಲ್ಲಿ ಕೃಷಿ ವೋಲ್ಟಾಯಿಕ್ಸ್ (ಅಗ್ರಿ ವೋಲ್ಟಾಯಿಕ್ಸ್) ತಂತ್ರಜ್ಞಾನಕ್ಕೆ ಪ್ರತ್ಯೇಕ ಒತ್ತು ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ.
ಯುರೋಪಿಯನ್ ಯೂನಿಯನ್ನ ಡಿಜಿಟಲ್ ಮಾರ್ಕೆಟ್ಸ್ ಕಾಯ್ದೆಯ (ಡಿಎಂಎ) ನಿಯಮಗಳನ್ನು ಪಾಲಿಸಲು ಗೂಗಲ್ ತನ್ನ ಸರ್ಚ್ ಫಲಿತಾಂಶಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಕಾಯ್ದೆಯ ನಿಯಮಗಳಿಂದಾಗಿ ಬುಕಿಂಗ್ ಹಾಗೂ ಸ್ಥಳೀಯ ಮಾಹಿತಿ ತಲುಪಿಸುವ ಉಪಕರಣಗಳನ್ನು ತೆರವುಗೊಳಿಸಿರುವುದರಿಂದ ಬಳಕೆದಾರರಿಗೆ ಗೂಗಲ್ ಸರ್ಚ್ ಅನುಭವ ಕುಸಿಯಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.