
Pulse of the Public
ಕಾಲ್ಪನಿಕ ಚಿತ್ರಹೊಳೆನರಸೀಪುರ ತಾಲೂಕಿನ ಕುಂಚೇವುಹೊಸಳ್ಳಿ ಗ್ರಾಮದಲ್ಲಿ ತಡರಾತ್ರಿ ವಾಸದ ಮನೆ ಅಂಗಳಕ್ಕೆ ನುಗ್ಗಿದ ಚಿರತೆಯೊಂದು ಕಟ್ಟಿಹಾಕಿದ್ದ ಎಮ್ಮೆ ಕರುವನ್ನು ಕೊಂದು ಹೊತ್ತೊಯ್ದಿದೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ದಾವಣಗೆರೆ ನಗರಕ್ಕೆ ಮಾತ್ರ ನೀರು ಹರಿಸಿ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಭಾಗದ ನಾಲೆಗಳಿಗೆ ಭದ್ರಾ ನೀರು ಬಿಡದಿರುವುದನ್ನು ಖಂಡಿಸಿ ಶಾಸಕ ಬಿ.ಪಿ. ಹರೀಶ್ ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ ಸೆಪ್ಟೆಂಬರ್ 9 ರಂದು ಚಿತ್ರದುರ್ಗ ತಾಲೂಕಿನ ಗೊನೂರು ಕೆರೆಗೆ ನೀರು ಹರಿದು ಬಂದಿದ್ದು, ಬರದ ನಾಡಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ದುಷ್ಕರ್ಮಿಗಳು ಹೂವಿನ ಬೆಳೆ ರಕ್ಷಣಾ ಕವರ್ಗಳನ್ನು ಕತ್ತರಿಸಿ ನಾಶಪಡಿಸಿದ್ದಾರೆ. ರಕ್ಷಣೆ ನೀಡುತ್ತಿದ್ದ ₹50,000 ಮೌಲ್ಯದ ಶೇಡ್ನೆಟ್ ಕವರ್ ಹಾಳಾಗಿದ್ದು, ಯುವ ರೈತ ಜಿ.ಎಂ. ಸುಧಾಕರ್ ಕಂಗಾಲಾಗಿದ್ದಾರೆ.