
Pulse of the Public
ಕಾಲ್ಪನಿಕ ಚಿತ್ರಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ಸೈಬರ್ ದಾಳಿಗಳಿಂದ ರಕ್ಷಿಸಲು ಸೆಂಟರ್ ಫಾರ್ ಇಂಟರ್ನೆಟ್ ಸೆಕ್ಯುರಿಟಿ ಹಾಗೂ ಓಪನ್ಎಐ ಸಂಸ್ಥೆಗಳು ಜಂಟಿಯಾಗಿ ಎಐ ಸೈಬರ್ ಡಿಫೆನ್ಸ್ ಪೈಲಟ್ ಯೋಜನೆಯನ್ನು ಪ್ರಾರಂಭಿಸಿವೆ.
ಸಿಸ್ಕೋ, ಸಿಟ್ರಿಕ್ಸ್, ಫೋರ್ಟಿನೆಟ್ ಮತ್ತು ಗೂಗಲ್ ಕ್ರೋಮ್ ಸಾಫ್ಟ್ವೇರ್ಗಳಲ್ಲಿ ಗಂಭೀರ ಭದ್ರತಾ ದೋಷಗಳನ್ನು ಸೈಬರ್ ಅಪರಾಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ‘ಸಿಎಸ್ಎ’ ಸಂಸ್ಥೆಯು ತಕ್ಷಣವೇ ಇವುಗಳನ್ನು ನಿವಾರಿಸಲು ಭದ್ರತಾ ಪ್ಯಾಚ್ ಅಳವಡಿಸಲು ಸೂಚಿಸಿದೆ.
ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (ನಿಕ್ಸಿ) ಮತ್ತು ಏಷ್ಯಾ ಪೆಸಿಫಿಕ್ ನೆಟ್ವರ್ಕ್ ಇನ್ಫಾರ್ಮೇಷನ್ ಸೆಂಟರ್ (ಅಪನಿಕ್) ಸೆಪ್ಟೆಂಬರ್ 8, 2026 ರಂದು ಮುಂಬೈನಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದಲ್ಲಿ ಐಪಿವಿ6 ಅಳವಡಿಕೆಯನ್ನು ವೇಗಗೊಳಿಸಲು ಹಾಗೂ ಇಂಟರ್ನೆಟ್ ನೆಟ್ವರ್ಕ್ ರೂಟಿಂಗ್ ಭದ್ರತೆಯನ್ನು ಹೆಚ್ಚಿಸಲು ಈ ಒಪ್ಪಂದ ನೆರವಾಗಲಿದೆ.
ಭಾರತದ ದೈತ್ಯ ಐಟಿ ಸಂಸ್ಥೆ ಎಚ್ಸಿಎಲ್ಟೆಕ್, ಬೆಂಗಳೂರಿನಲ್ಲಿ ₹185 ಕೋಟಿ ಹೂಡಿಕೆಯಲ್ಲಿ 40,000 ಚದರ ಅಡಿಯ ಅತ್ಯಾಧುನಿಕ ಸೆಮಿಕಂಡಕ್ಟರ್ ಪ್ರಯೋಗಾಲಯವನ್ನು ಉದ್ಘಾಟಿಸಿದೆ.