
Pulse of the Public
ಕಾಲ್ಪನಿಕ ಚಿತ್ರಹಾಸನ ತಾಲೂಕಿನ ಶಾಂತಿಗ್ರಾಮದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ವರದಿಯಾದ ಹಿನ್ನೆಲೆಯಲ್ಲಿ, 172 ವಿದ್ಯಾರ್ಥಿಗಳನ್ನು ಪರ್ಯಾಯ ವಸತಿನಿಲಯಗಳಿಗೆ ಸ್ಥಳಾಂತರಿಸಲಾಗಿದೆ.
ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದಲ್ಲಿ ಹಲ್ಲಿ ಪತ್ತೆಯಾಗಿದ್ದು, ಉಪ್ಪಿಟ್ಟು ಸೇವಿಸಿದ 107 ಮಕ್ಕಳು ಅಸ್ವಸ್ಥಗೊಂಡು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಕ್ಷಣದ ವೈದ್ಯಕೀಯ ಚಿಕಿತ್ಸೆಯ ನಂತರ ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಮೂಡಲಗಿ ಶೈಕ್ಷಣಿಕ ವಲಯದ ಹಲ್ಲೂರು ಕ್ರಾಸ್ ಕೆ.ಎಚ್.ಪಿ.ಎಸ್ ಶಾಲೆಯ ಶಿಕ್ಷಕ ಬಸಪ್ಪ ಪರಪ್ಪ ಪಾಟೀಲ 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯ ಐವರು ವಿದ್ಯಾರ್ಥಿಗಳು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಕ್ಷಾಬಂಧನ ಆಚರಿಸಿ ಹೆಮ್ಮೆ ತಂದಿದ್ದಾರೆ.