
Pulse of the Public
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಸ್ಫೋಟಗೊಂಡು ತೀವ್ರ ಆರೋಗ್ಯ ಸಮಸ್ಯೆಗೆ ಈಡಾಗಿದ್ದ 16 ವರ್ಷದ ಬಾಲಕಿಯೊಬ್ಬಳಿಗೆ ಎಂಟು ದಿನಗಳ ಕಾಲ ಇಸಿಎಂಒ ಜೀವ ರಕ್ಷಕ ವ್ಯವಸ್ಥೆಯಡಿ ಚಿಕಿತ್ಸೆ ನೀಡಿ, ಯಶಸ್ವಿಯಾಗಿ ಪ್ರಾಣ ಉಳಿಸಲಾಗಿದೆ.
ಬೆಂಗಳೂರಿನ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ 'ದಿ ಗಿಫ್ಟ್ ಆಫ್ ಲೈಫ್' ಶೀರ್ಷಿಕೆಯಡಿ ಬೃಹತ್ ಅಂಗಾಂಗ ದಾನ ಜಾಗೃತಿ ಅಭಿಯಾನ ಆಯೋಜಿಸಲಾಗಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಭಾಗವಹಿಸಿ ಮರಣೋತ್ತರ ಅಂಗಾಂಗ ದಾನಕ್ಕೆ ಕರೆ ನೀಡಿದರು.
ರಾಜ್ಯ ಸರ್ಕಾರದ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರಿಗೆ ವಾರ್ಷಿಕ ₹5 ಲಕ್ಷದವರೆಗೆ ನಗದ ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ 'ಸಂಧ್ಯಾ ಕಿರಣ್' ಯೋಜನೆಯ ಜಾರಿಗೆ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಅಪೋಲೋ ಆಸ್ಪತ್ರೆಗಳು 'ಆಲ್ವೇಸ್ ಓಪನ್, ಆಲ್ವೇಸ್ ಹಿಯರ್' ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದ್ದು, ಹೊರರೋಗಿ ಸಮಾಲೋಚನೆಗಳು ಮತ್ತು ರೋಗನಿರ್ಣಯ ಸೇರಿದಂತೆ ದಿನನಿತ್ಯದ ಮತ್ತು ಯೋಜಿತ ಆರೋಗ್ಯ ಸೇವೆಗಳನ್ನು ಭಾನುವಾರ ಸೇರಿದಂತೆ ವಾರದ ಏಳೂ ದಿನಗಳೂ ಲಭ್ಯವಾಗುವಂತೆ ಮಾಡಿದೆ. ಇದು ಕೆಲಸ ಮಾಡುವ ವ್ಯಕ್ತಿಗಳು ಮತ್ತು ಕುಟುಂಬಗಳು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಆರೈಕೆಯನ್ನು ಪಡೆಯಲು ಎದುರಾಗುವ ಸಮಯದ ಅಡೆತಡೆಗಳನ್ನು ನಿವಾರಿಸುವ ಗುರಿ ಹೊಂದಿದೆ.