
Pulse of the Public
ಕಾಲ್ಪನಿಕ ಚಿತ್ರಜಾಗತಿಕ ಭೂರಾಜಕೀಯ ಉದ್ವಿಗ್ನತೆ ಹಾಗೂ ಪೂರೈಕೆ ಅಡಚಣೆಗಳಿಂದ ಉಂಟಾಗುವ ಆರ್ಥಿಕ ಸಂಕಷ್ಟ ಎದುರಿಸಲು ಎಂಎಸ್ಎಂಇ ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಬೆಂಬಲ ನೀಡುವ ಇಸಿಎಲ್ಜಿಎಸ್ 5.0 ಯೋಜನೆಯ ವಿವರಗಳನ್ನು ಹಣಕಾಸು ಸಚಿವಾಲಯ ಪ್ರಕಟಿಸಿದೆ.
ದೇಶದ ಬಲವಾದ ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳು ವಾಸ್ತವಿಕ ವ್ಯಾಪಾರ ಮಟ್ಟದಲ್ಲಿ ಸಂಪೂರ್ಣವಾಗಿ ಪ್ರತಿಫಲಿಸುತ್ತಿಲ್ಲ ಎಂದು ಸಿಐಐ ನಡೆಸಿದ ಹೊಸ ಸಮೀಕ್ಷೆ ತಿಳಿಸಿದೆ. ಆದಾಗ್ಯೂ, ಪೂರೈಕೆ ಸಾಲಿನ ಅಡಚಣೆಗಳು ಕಡಿಮೆಯಾಗಿರುವುದರಿಂದ ಎರಡನೇ ತ್ರೈಮಾಸಿಕದ ಉದ್ದಿಮೆಗಳ ಆತ್ಮವಿಶ್ವಾಸ ಸೂಚ್ಯಂಕ ಹೆಚ್ಚಾಗಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವ್ಯಾಪಾರ ಹಾಗೂ ಆರ್ಥಿಕ ಸಹಕಾರ ಹೆಚ್ಚಿಸಲು ಜಂಟಿ ಕಾರ್ಯಕಾರಿ ಗುಂಪಿನ ವರ್ಚುವಲ್ ಸಭೆ ನಡೆಯಿತು. ವರ್ತಕರಿಗೆ ವೀಸಾ ಸೌಲಭ್ಯ, ಬ್ಯಾಂಕಿಂಗ್ ಸಹಕಾರ, ಕಸ್ಟಮ್ಸ್ ಪ್ರಕ್ರಿಯೆಗಳ ಸರಳೀಕರಣ ಮತ್ತು ಕೃಷಿ-ಔಷಧೀಯ ಉತ್ಪನ್ನಗಳ ವ್ಯಾಪಾರ ಉತ್ತೇಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಭಾರತದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಶೇ. 7.8ರ ಜಿಡಿಪಿ ಬೆಳವಣಿಗೆಯ ದರ ಸರಿಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ಸ್ಪಷ್ಟಪಡಿಸಿದ್ದು, ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರ ಆರೋಪಗಳನ್ನು ತಳ್ಳಿಹಾಕಿದೆ.