
Pulse of the Public
ಕಾಲ್ಪನಿಕ ಚಿತ್ರಸೊನಿಕ್ವಾಲ್ ಸಂಸ್ಥೆಯ ಸೆಕ್ಯೂರ್ ಮೊಬೈಲ್ ಆಕ್ಸೆಸ್ ೧೦೦೦ (SMA 1000) ಸರಣಿಯ ವಿಪಿಎನ್ ಸಾಧನಗಳಲ್ಲಿ ಎರಡು ಗಂಭೀರ ಭದ್ರತಾ ಲೋಪಗಳು ಪತ್ತೆಯಾಗಿದ್ದು, ಹ್ಯಾಕರ್ಸ್ಗಳು ಇವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಲಾಗಿದೆ. ಯಾವುದೇ ದೃಢೀಕರಣವಿಲ್ಲದೆ ನೆಟ್ವರ್ಕ್ ಪ್ರವೇಶಿಸುವುದನ್ನು ತಡೆಯಲು ತಕ್ಷಣವೇ ಲಭ್ಯವಿರುವ ಭದ್ರತಾ ಪ್ಯಾಚ್ಗಳನ್ನು ನವೀಕರಿಸಲು ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಅಮೆರಿಕದ ಸರ್ಕಾರಿ ಸಂಸ್ಥೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದ್ದ ಚೀನಾ ಬೆಂಬಲಿತ ಹ್ಯಾಕಿಂಗ್ ಜಾಲದ ಪ್ರಮುಖ ಡೊಮೇನ್ಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಹಾಗೂ ಎಫ್ಬಿಐ ವಶಪಡಿಸಿಕೊಂಡಿವೆ. ಕ್ಯೂಸ್ಕ್ಯಾನ್ ಮತ್ತು ಕ್ಯೂಟಿರೂಟರ್ ಎಂಬ ಎರಡು ಪ್ರಮುಖ ಸೈಬರ್ ಗೂಢಚಾರಿಕೆ ಪ್ಲಾಟ್ಫಾರ್ಮ್ಗಳನ್ನು ಕಾರ್ಯಾಚರಣೆಯಿಂದ ನಿಷ್ಕ್ರಿಯಗೊಳಿಸಲಾಗಿದೆ.
ಸೈಬರ್ ಭದ್ರತಾ ಸಂಸ್ಥೆ ಸೋನಿಕ್ವಾಲ್, ತನ್ನ ಎಂಟರ್ಪ್ರೈಸ್ 'ಸೆಕ್ಯೂರ್ ಮೊಬೈಲ್ ಆಕ್ಸೆಸ್ 1000' ಸರಣಿಯ ವಿಪಿಎನ್ ಸಾಧನಗಳಲ್ಲಿ ಸಕ್ರಿಯವಾಗಿ ದುರ್ಬಳಕೆಯಾಗುತ್ತಿರುವ ಎರಡು ಜೀರೋ-ಡೇ ಭದ್ರತಾ ಲೋಪಗಳನ್ನು ಸರಿಪಡಿಸಲು ತುರ್ತು ಸೆಕ್ಯೂರಿಟಿ ಪ್ಯಾಚ್ಗಳನ್ನು ಬಿಡುಗಡೆ ಮಾಡಿದೆ.
ಇಂಟರ್ನೆಟ್ಗೆ ಸಂಪರ್ಕಗೊಂಡಿರುವ ಸುಮಾರು 22,000 ಮೈಕ್ರೋಸಾಫ್ಟ್ ಎಕ್ಸ್ಚೇಂಜ್ ಸರ್ವರ್ಗಳಲ್ಲಿ ಗಂಭೀರ ಭದ್ರತಾ ಲೋಪವಿರುವುದು ಪತ್ತೆಯಾಗಿದೆ. ಸೈಬರ್ ದಾಳಿಕೋರರು ಈ ಲೋಪವನ್ನು ಬಳಸಿಕೊಂಡು ಸಂಸ್ಥೆಗಳ ಇಮೇಲ್ ಖಾತೆಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿದ್ದು, ತಕ್ಷಣ ಅಪ್ಡೇಟ್ ಮಾಡಲು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.