
Pulse of the Public
ಕಾಲ್ಪನಿಕ ಚಿತ್ರವಿಶೇಷ ಸಾಂದ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಲ್ಲಿ ಹೆಸರು ವ್ಯತ್ಯಾಸವಾಗಿದ್ದರಿಂದ ಉಳ್ಳಾಲ ತಾಲೂಕಿನ ಪದ್ಮಶ್ರೀ ಪುರಸ್ಕೃತ ಹರೇಖಳ ಹಜಬ್ಬ ಅವರಿಗೆ ನೀಡಲಾಗಿದ್ದ ನೋಟಿಸ್ ಅನ್ನು ಚುನಾವಣಾಧಿಕಾರಿಗಳು ಹಿಂಪಡೆದಿದ್ದಾರೆ. ಹರೇಖಳ ಗ್ರಾಮದಲ್ಲಿರುವ ಹಜಬ್ಬ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಪಟ್ಟಿಯಲ್ಲಿ ತಿದ್ದುಪಡಿ ಮಾಡಿದ್ದಾರೆ.
ಮಂಚೇನಹಳ್ಳಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಸ್ತಾನ್ ಸಾಬ್ ನೇಮಕಗೊಂಡಿದ್ದು, ಶಾಸಕ ಪ್ರದೀಪ್ ಈಶ್ವರ್ ಹಾಗೂ ನಾಯಕರಿಗೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.
ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಸ್ವಂತ ರುದ್ರಭೂಮಿ ಇಲ್ಲದ ಕಾರಣ, ಮೃತಪಟ್ಟ ಓಬಿಸಿ ಸಮುದಾಯದ ವೃದ್ಧ ಪಚ್ಚಿಯಪ್ಪ ಅವರ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಉಡುತೊರೆ ಹಳ್ಳದ ದಂಡೆಯಲ್ಲೇ ನೆರವೇರಿಸಲಾಗಿದೆ.
ಕೃಷ್ಣರಾಜಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (ಎಸ್ಐಆರ್-2026) ವಿಚಾರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಆಟೋಗಳು ಹಾಗೂ ಜಾಥಾಗಳಿಗೆ ಚಾಲನೆ ನೀಡಲಾಗಿದೆ.