
Pulse of the Public

ಕುಂದಗೋಳ ತಾಲೂಕಿನ ಶಿರೂರು ಗ್ರಾಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಂದ 'ರೈತ ಸಿರಿ' ಕೃಷಿ ಪ್ರದರ್ಶನ ಹಾಗೂ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮ ಜರುಗಿತು.
ಅಳ್ನಾವರ ತಾಲೂಕಿನಲ್ಲಿ ವಾಡಿಕೆಗಿಂತ ಶೇಕಡಾ 50ಕ್ಕಿಂತ ಹೆಚ್ಚು ಮಳೆ ಅಭಾವ ಉಂಟಾಗಿದ್ದರೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ರೈತರು ಹಾಗೂ ಸ್ಥಳೀಯ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಧಾರವಾಡ ತಾಲೂಕಿನ ಹೊಸವಾಲ, ವೀರಾಪುರ, ರಾಮಾಪುರ ಹಾಗೂ ಹೆಗ್ಗೇರಿ ಗ್ರಾಮಗಳ ರೈತರು ಧಾರವಾಡ–ಬೆಳಗಾವಿ ಕೈಗಾರಿಕಾ ಕಾರಿಡಾರ್ ಯೋಜನೆಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮ ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಸುಮಾರು 270 ಎಕರೆ ಜಮೀನನ್ನು ಸರ್ಕಾರಿ ‘ಬಿ ಖರಾಬು’ ಎಂದು ನಮೂದಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಚನ್ನಗಿರಿ ಉಪವಿಭಾಗದ ಶಾಂತಿಸಾಗರ ವಲಯದ ಯಡೇಹಳ್ಳಿಯಲ್ಲಿ ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ 3 ವರ್ಷದ ಗಂಡು ಕರಡಿ ಮೃತಪಟ್ಟಿದೆ. ಕಳೆಬರವನ್ನು ಹೂತುಹಾಕಿದ್ದ ತೋಟದ ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.