ಮಂಗಳೂರಿನಲ್ಲಿ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೈಟೆಕ್ 'ಎಐ' ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸರ್ಕಾರಿ ಮಾನ್ಯತೆಯ ಎಐ ಪ್ರೊಫೆಷನಲ್ ಆಗಲು ನೆರವಾಗುವ ಈ ಕಾರ್ಯಕ್ರಮಕ್ಕೆ ಯತಿಕಾರ್ಪ್ ಸಂಸ್ಥೆಯು ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ ಮಂಗಳೂರು) ಸಹಭಾಗಿತ್ವದಲ್ಲಿ ಅರ್ಜಿ ಆಹ್ವಾನಿಸಿದೆ.
'ಎಐ ಪ್ರಗತಿ ಪಥ' ಎಂಬ ಈ ಆಕ್ಸೆಸಿಬಲ್ ಇಂಟೆನ್ಸಿವ್ ಕೋರ್ಸ್ ಪ್ರಾಯೋಗಿಕ ಎಐ ತರಬೇತಿ, ಒಂದು ವರ್ಷದ ವಸತಿ ಸಹಿತ ಕಾರ್ಯಕ್ರಮ ಹಾಗೂ ಆಸಕ್ತರಿಗೆ ಮೂರು ತಿಂಗಳ ಇಂಟರ್ನ್ಶಿಪ್ ಅವಕಾಶವನ್ನು ಒಳಗೊಂಡಿದೆ. ತರಬೇತಿ ಪೂರ್ಣಗೊಂಡ ನಂತರ, ಸರ್ಕಾರದಿಂದ ಪ್ರಮಾಣೀಕರಿಸಿದ ಸರ್ಟಿಫಿಕೇಟ್ ದೊರೆಯಲಿದ್ದು, ಅತ್ಯಂತ ಬೇಡಿಕೆಯ 84ಕ್ಕೂ ಹೆಚ್ಚು ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶಗಳು ಲಭ್ಯವಾಗಲಿವೆ. ಈ ಉದ್ಯೋಗ ಆಧಾರಿತ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ.
ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಪದವಿಗಳು ಮತ್ತು ಇಂಜಿನಿಯರಿಂಗ್ ಅರ್ಹತೆಗಳು ನಿರೀಕ್ಷಿತ ಉದ್ಯೋಗಗಳನ್ನು ಪಡೆಯಲು ಸಾಕಾಗುತ್ತಿಲ್ಲ. ಜಾಗತಿಕ ಉದ್ಯೋಗ ಮಾರುಕಟ್ಟೆಯು ಸಂಪೂರ್ಣವಾಗಿ ಎಐ ತಂತ್ರಜ್ಞಾನದ ಕಡೆಗೆ ಬದಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸುಮಾರು 7 ಕೋಟಿ ಉದ್ಯೋಗಗಳು ಕಣ್ಮರೆಯಾಗಿ, 17 ಕೋಟಿ ಎಐ ಆಧಾರಿತ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದ್ದು, ಪ್ರತಿ ತಾಲ್ಲೂಕಿನಿಂದ ಕೇವಲ 10 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ತರಬೇತಿಯಲ್ಲಿ ಏನಿರುತ್ತೆ?
ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಸಿರುವ AI ತಂತ್ರಜ್ಞಾನಗಳನ್ನು ಪ್ರಾಕ್ಟಿಕಲ್ ಆಗಿ ಕಲಿಸಲಾಗುತ್ತದೆ. ಪ್ರಾಂಪ್ಟ್ ಇಂಜಿನಿಯರಿಂಗ್, ಕಸ್ಟಮ್ AI ಡೆವಲಪ್ ಸಿಸ್ಟಮ್ ರಚಿಸುವ RAG Applications, ಅತ್ಯಾಧುನಿಕ AI ರೋಬೋಟ್ಸ್/ಏಜೆಂಟ್ಗಳ ಅಭಿವೃದ್ಧಿಯಾಗಿ ಎಜುಕೇಶನ್, ಯಾವುದೇ ಕೋಡಿಂಗ್ ಜ್ಞಾನ ಇಲ್ಲದೆ ಜಾಗತಿಕ ಹಾಗೂ ಹೈ-ಡೆಮಾಂಡ್ AI ಬಿಲ್ಡರ್ಗಳಾಗಿ ಕ್ಲಾಡ್ (Claude), ಚಾಟ್ಜಿಪಿಟಿ (ChatGPT), ಗೂಗಲ್ ಸೇರಿದಂತೆ 10 ಪ್ರಮುಖ AI ಸಮ್ಮರ್ ಅಪ್ಲಿಕೇಶನ್ಗಳ ತರಬೇತಿ ಜೊತೆಗೆ, 5 ವರ್ಷದ ಅನುಭವಕ್ಕೆ ಸಮನಾದ 7 ಕ್ಯಾಪ್ಸ್ಟೋನ್ ಪ್ರಾಜೆಕ್ಟ್ಗಳು ಈ ತರಬೇತಿಗೆ ಅತಿ ಹೆಚ್ಚಿನ ಬೆನಿಫಿಟ್ ಅನ್ನು ತಂದಿರುತ್ತವೆ. ಅಷ್ಟೇ ಅಲ್ಲದೆ ಪ್ರತ್ಯೇಕವಾಗಿ ಉಚಿತ ಡ್ಯಾಶ್ಬೋರ್ಡ್ ಪೋರ್ಟಲ್ ಮೂಲಕ ಉದ್ಯೋಗ ಮತ್ತು ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು.
ಯಾರೆಲ್ಲ ಭಾಗವಹಿಸಬಹುದು?
ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು PUC, ಡಿಪ್ಲೊಮಾ, ಪದವಿ(ಎಲ್ಲಾ ಪದವೀಧರರು), ಇಂಜಿನಿಯರಿಂಗ್ ಸೇರಿದಂತೆ ಪ್ರಸ್ತುತ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸುವುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಗಳೂರಿನ ವಿಶೇಷ ತರಬೇತಿ ಕೇಂದ್ರದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ AI ಲ್ಯಾಬ್ಕ್ಯಾಂಪ್ನ್ನು ನೀಡಲಾಗುತ್ತದೆ. ತರಬೇತಿಯ ನಂತರ ಅಭ್ಯರ್ಥಿಗಳಿಗೆ ಅತ್ಯಂತ ಮೌಲ್ಯಯುತವಾದ 'Government AI Professional Certificate' ನೀಡಲಾಗುತ್ತದೆ.
ಉದ್ಯೋಗದ ಆಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಪ್ಲೇಸ್ಮೆಂಟ್ ನೆರವು ನೀಡಲಾಗುವುದಲ್ಲದೆ, ಸ್ವಂತ ಬಿಸಿನೆಸ್ ಅಥವಾ ಸ್ಟಾರ್ಟ್ ಅಪ್ ಆರಂಭಿಸಲು ಇಲ್ಲಿ ಇರುವ ತಜ್ಞರಿಂದ ಮೆಂಟರ್ಶಿಪ್, ಬಿಸಿನೆಸ್ ಫಂಡಿಂಗ್ ಮತ್ತು ಸರ್ಕಾರದ ಸೀಡ್ ಫಂಡಿಂಗ್ ಪಡೆಯಲು ಅವಕಾಶವಿದೆ. ತಾಲ್ಲೂಕು ಮಟ್ಟದ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ಜಾಗತಿಕ ಮಟ್ಟದ AI ಅವಕಾಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಇದೊಂದು ಅತ್ಯಪೂರ್ವ ಯೋಜನೆಯಾಗಿದೆ.
ಯಾಕೆ ಈ ತರಬೇತಿಗೆ ಅರ್ಜಿ ಬೇಡಿಕೆ?
ಇಂದಿನ ಮಾರುಕಟ್ಟೆಯಲ್ಲಿ ಈ ತರಬೇತಿ ಇಷ್ಟೊಂದು ದೊಡ್ಡ ಸಂಚಲನ ಮೂಡಿಸಲು ಕಾರಣ, ಇದರ ವ್ಯಾಪ್ತಿ ಮತ್ತು ಬಹುಮುಖಿ ಉದ್ಯೋಗ ಅವಕಾಶಗಳು. ಈ ಸುಧಾರಿತ AI ತರಬೇತಿಯ ಕೇವಲ ಸಾಫ್ಟ್ವೇರ್ ಅಥವಾ ಕಂಪ್ಯೂಟರ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಪ್ರಸ್ತುತ ಮಾರುಕಟ್ಟೆಯ ಬಿಸಿನೆಸ್, ಮಾರ್ಕೆಟಿಂಗ್, ಅಕೌಂಟ್ಸ್, HR, ಶಿಕ್ಷಣ, ಮಾಧ್ಯಮ, ಕೃಷಿ, ಕಾನೂನು ಮತ್ತು ವಿನ್ಯಾಸ (Design) ಸೇರಿದಂತೆ ಬರೋಬ್ಬರಿ 84ಕ್ಕೂ ಹೆಚ್ಚು ವಿಭಿನ್ನ ಕ್ಷೇತ್ರಗಳಲ್ಲಿ ಸೃಷ್ಟಿಯಾಗಿರುವ ಆಧುನಿಕ ಉದ್ಯೋಗಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಲು ಅಥವಾ ಸ್ವಂತ ಉದ್ಯಮವನ್ನು ಸ್ಥಾಪಿಸಲು ಸಂಪೂರ್ಣ ನೆರವು ಮಾಡುತ್ತದೆ.
ಸೀಟುಗಳ ಹಂಚಿಕೆ ಹೇಗೆ?
ರಾಜ್ಯದಾದ್ಯಂತ ತಾಲ್ಲೂಕು ಮಟ್ಟದಲ್ಲಿ ಯುವಕ-ಯುವತಿಯರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ, ಪ್ರತಿ ತಾಲ್ಲೂಕಿಗೆ ಅಭ್ಯರ್ಥಿಗಳ 10 ಸೀಟುಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ (50% - 5 ಸೀಟುಗಳು): ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಅಥವಾ BCA ಮುಗಿಸಿ ಕೆಲಸ ಹುಡುಕುತ್ತಿರುವ ಯುವಕರಿಗೆ.
ಮಹಿಳಾ ಅಭ್ಯರ್ಥಿಗಳಿಗೆ (30% - 3 ಸೀಟುಗಳು): ತಂತ್ರಜ್ಞಾನ ಕ್ಷೇತ್ರದಲ್ಲಿ ಬೆರೆಯಲು ಬಯಸುವ ಯುವತಿಯರಿಗೆ ವಿಶೇಷ ಆದ್ಯತೆ.
ಕರಿಯರ್ ಅಪ್ಗ್ರೇಡ್ (20% - 2 ಸೀಟುಗಳು): ಈಗಾಗಲೇ ಕಡಿಮೆ ಸಂಬಳ ಕೆಲಸದಲ್ಲಿದ್ದು, ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ.
ಹೀಗೆ ಪ್ರತಿ ತಾಲ್ಲೂಕಿನಿಂದ ಕಟ್ಟುನಿಟ್ಟಾದ ಆಯ್ಕೆ ಪ್ರಕ್ರಿಯೆ ಮೂಲಕ ಒಟ್ಟು 10 ಅರ್ಹ ಅಭ್ಯರ್ಥಿಗಳನ್ನು ವಿಶೇಷ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ "AI ತಿಳಿವನ್ನು ಜಗತ್ತಿಗೆ ಆಳವಾಗಿ" ಎಂಬುದೇ ಈ ಸಂಸ್ಥೆಯ “ಪ್ರತಿ ತಾಲ್ಲೂಕಿನಿಂದ 10 AI ಪ್ರೊಫೆಷನಲ್” ಸೃಷ್ಟಿಸುವ ಈ ಕನಸು ರಾಜ್ಯದ ಯುವಕರ ಭವಿಷ್ಯಕ್ಕೆ ಹೊಸ ದಾರಿದೀಪ ಆಗುವುದರಲ್ಲಿ ಸಂದೇಹವಿಲ್ಲ. ಈ ಅಭೂತಪೂರ್ವ ಹೈಟೆಕ್ ತರಬೇತಿಯ ಸದ್ಭಯೋಗ ಪಡೆದುಕೊಳ್ಳಲು ಕೆಳಗಿನ ಅಧಿಕೃತ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬಹುದು.
Apply Now:
https://www.aipragati.in/kpt-govt-polytechinc
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9141160295
ಹೆಚ್ಚಿನ ಮಾಹಿತಿಗಾಗಿ, AI Pragati ಗೆ ಭೇಟಿ ನೀಡಿ (www.aipragati.in).