
Pulse of the Public
ಕಾಲ್ಪನಿಕ ಚಿತ್ರಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಕೃಷಿ ಸಹಕಾರ, ಡಿಜಿಟಲ್ ತಂತ್ರಜ್ಞಾನ ಮತ್ತು ಆಹಾರ ಪೂರೈಕೆ ಸರಪಳಿಯನ್ನು ಬಲಪಡಿಸಲು 2026-2030ರ ಅವಧಿಯ 5 ವರ್ಷಗಳ ಹೊಸ ಕ್ರಿಯಾ ಯೋಜನೆಗೆ ಸಮ್ಮತಿಸಿವೆ.
ಜಾರ್ಖಂಡ್ನ 4,395 ಗ್ರಾಮ ಪಂಚಾಯಿತಿಗಳು ಮತ್ತು 26,777 ಹಳ್ಳಿಗಳಿಗೆ ಹೈ-ಸ್ಪೀಡ್ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ₹1,684 ಕೋಟಿ ಅನುದಾನ ಮಂಜೂರು ಮಾಡಿದೆ.
ಜಪಾನ್ ಕ್ರೆಡಿಟ್ ರೇಟಿಂಗ್ ಸಂಸ್ಥೆಯು (ಜೆಸಿಆರ್) ಭಾರತದ ದೀರ್ಘಕಾಲೀನ ಸಾರ್ವಭೌಮ ಸಾಲದ ರೇಟಿಂಗ್ ಅನ್ನು 'BBB+' ನಿಂದ 'A-' ಗೆ ಏರಿಸಿದ್ದು, ದೇಶೀಯ ಆರ್ಥಿಕತೆಯ ಸ್ಥಿರತೆಯನ್ನು ಎತ್ತಿಹಿಡಿದಿದೆ.
ಇಂಧನ ಮತ್ತು ಕೈಗಾರಿಕಾ ಆಮದು ಹೆಚ್ಚಿದ್ದರಿಂದ BRICS ಒಕ್ಕೂಟದ ದೇಶಗಳೊಂದಿಗೆ ಭಾರತದ ಸರಕು ವ್ಯಾಪಾರ ಕೊರತೆಯು $226 ಶತಕೋಟಿಗೆ ಏರಿಕೆಯಾಗಿದೆ. ನವದೆಹಲಿಯಲ್ಲಿ ನಡೆಯಲಿರುವ 18ನೇ BRICS ಶೃಂಗಸಭೆಯಲ್ಲಿ ರಫ್ತು ಉತ್ತೇಜನ ಮತ್ತು ಸ್ಥಳೀಯ ಕರೆನ್ಸಿ ವ್ಯಾಪಾರಕ್ಕೆ ಆದ್ಯತೆ ನೀಡುವಂತೆ ರಫ್ತುದಾರರು ಮನವಿ ಮಾಡಿದ್ದಾರೆ.