
Pulse of the Public
ಕಾಲ್ಪನಿಕ ಚಿತ್ರಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆಪ್ಟೆಂಬರ್ 15ರ ಎಂಜಿನಿಯರ್ಗಳ ದಿನಾಚರಣೆಯನ್ನು ರಾಜ್ಯ ಸರ್ಕಾರಿ ಅಧಿಕೃತ ಕಾರ್ಯಕ್ರಮವನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಇದರೊಂದಿಗೆ ರಾಜ್ಯದ ಎಂಜಿನಿಯರ್ಗಳು ತಮ್ಮ ಹೆಸರಿನ ಮುಂದೆ 'Er.' ಎಂಬ ಉಪಪದ ಬಳಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ.
ಖಾರೀಫ್ ಋತುವಿನಲ್ಲಿ ಮಳೆಯ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಮತ್ತೆ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ರಾಜ್ಯದಲ್ಲಿ ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ಪ್ರವಾಸಗಳಲ್ಲಿ ಸೆಲ್ಫಿ ಹಾಗೂ ರೀಲ್ಸ್ ಚಿತ್ರೀಕರಣವನ್ನು ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ ನಿಷೇಧಿಸಿದ್ದು, ಪ್ರವಾಸದ ಅವಧಿಯನ್ನು ಗರಿಷ್ಠ ಐದು ದಿನಗಳಿಗೆ ಮಿತಿಗೊಳಿಸಿದೆ.
ಹುಬ್ಬಳ್ಳಿಯಲ್ಲಿ ನೂತನ ವೈದ್ಯಕೀಯ ಕಾಲೇಜು ಮತ್ತು 1,200 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಢೀರ್ ಅನಾರೋಗ್ಯದಿಂದಾಗಿ ಗೈರಾಗಿದ್ದಾರೆ. ವೈದ್ಯರ ಸಲಹೆಯಂತೆ ಹೋಟೆಲ್ನಲ್ಲೇ ವಿಶ್ರಾಂತಿ ಪಡೆದ ಕಾರಣ, ಸ್ಥಳೀಯ ನಾಯಕರು ಹಾಗೂ ಸಚಿವರು ಸಮಾರಂಭ ನೆರವೇರಿಸಿದರು.