
Pulse of the Public

ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಸ್ವಂತ ರುದ್ರಭೂಮಿ ಇಲ್ಲದ ಕಾರಣ, ಮೃತಪಟ್ಟ ಓಬಿಸಿ ಸಮುದಾಯದ ವೃದ್ಧ ಪಚ್ಚಿಯಪ್ಪ ಅವರ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಉಡುತೊರೆ ಹಳ್ಳದ ದಂಡೆಯಲ್ಲೇ ನೆರವೇರಿಸಲಾಗಿದೆ.
ಕೃಷ್ಣರಾಜಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (ಎಸ್ಐಆರ್-2026) ವಿಚಾರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಆಟೋಗಳು ಹಾಗೂ ಜಾಥಾಗಳಿಗೆ ಚಾಲನೆ ನೀಡಲಾಗಿದೆ.
ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಯುವ ಜನಾಂಗಕ್ಕೆ ರಾಜಕೀಯ ಅವಕಾಶ ನೀಡಲು ಶಾಸಕರು ಹಾಗೂ ಸಂಸದರಿಗೂ ನಿವೃತ್ತಿ ವಯಸ್ಸು ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಗುಳೇದಗುಡ್ಡ ಪಟ್ಟಣದ ಕರನಂದಿ ಕಲ್ಯಾಣ ಮಂಟಪದಲ್ಲಿ 'ಪ್ರಜಾಸೇವಾ ಆಂದೋಲನ' ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು. ಮೊದಲ ದಿನ ಸ್ವೀಕೃತವಾದ 253 ಮನವಿಗಳಲ್ಲಿ 153 ಅರ್ಜಿಗಳು ಉಚಿತ ಮನೆ ನಿರ್ಮಾಣಕ್ಕೆ ಸಂಬಂಧಿಸಿದ್ದವು.