
Pulse of the Public
ಕಾಲ್ಪನಿಕ ಚಿತ್ರಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮತ್ತು ಫಿಫಾ ಸಹಯೋಗದ ಕೋಚ್ ಎಜುಕೇಟರ್ ಅಭಿವೃದ್ಧಿ ಯೋಜನೆಯ ನಾಲ್ಕು ದಿನಗಳ ಅಂತಿಮ ಮಾಡ್ಯೂಲ್ ಸೆಪ್ಟೆಂಬರ್ 8 ರಂದು ಬೆಂಗಳೂರಿನಲ್ಲಿ ಪೂರ್ಣಗೊಂಡಿದೆ.
ಭಾರತ ಪುರುಷರ ಫುಟ್ಬಾಲ್ ತಂಡವು ವಿಶ್ವಕಪ್ ಆಟಗಾರರನ್ನು ಹೊಂದಿರುವ ಪನಾಮ ವಿರುದ್ಧ ಬೆಂಗಳೂರಿನ ಶ್ರೀ ಕಂಟೀರವ ಕ್ರೀಡಾಂಗಣದಲ್ಲಿ ಆಡಲಿರುವ ಸೌಹಾರ್ದ ಪಂದ್ಯವನ್ನು ಸೆಪ್ಟೆಂಬರ್ 25ಕ್ಕೆ ಎಐಎಫ್ಎಫ್ ಮರುನಿಗದಿಪಡಿಸಿದೆ.
2026-27ನೇ ಸಾಲಿನ ಇಂಡಿಯನ್ ಫುಟ್ಬಾಲ್ ಲೀಗ್ ಅಕ್ಟೋಬರ್ 30ರಿಂದ ಪ್ರಾರಂಭವಾಗಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಪ್ರಕಟಿಸಿದೆ. ಈ ಬಾರಿಯ ಲೀಗ್ನಲ್ಲಿ ಅಂಕಣದಲ್ಲಿ ಗರಿಷ್ಠ ಮೂವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಾಗಾಲ್ಯಾಂಡ್ ಮತ್ತು ಒಡಿಶಾಗಳನ್ನು ಹೊಸ ಪಂದ್ಯಾವಳಿ ತಾಣಗಳಾಗಿ ಸೇರ್ಪಡೆಗೊಳಿಸಲಾಗಿದೆ.
ಬಿಸಿಸಿಐ ದೇಶೀಯ ಪಂದ್ಯಾವಳಿಗಳಲ್ಲಿ ಆಡಲು ಭಾರತೀಯ ಪಾಸ್ಪೋರ್ಟ್ ಕಡ್ಡಾಯಗೊಳಿಸಿರುವ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಸೇರಿಸಲು ಬೊಂಬಾಯಿ ಹೈಕೋರ್ಟ್ ಸೂಚಿಸಿದೆ.