
Pulse of the Public

2010ರಲ್ಲಿ ನಡೆದ ಬೈಕ್ ಅಪಘಾತದ ನಕಲಿ ವಿವರಗಳನ್ನು ಸೃಷ್ಟಿಸಿ ವಿಮಾ ಪರಿಹಾರ ಪಡೆಯಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ, ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಆದೇಶಿಸಿದೆ.
ಪೀಣ್ಯ ನಿವಾಸಿಯೊಬ್ಬರಿಗೆ ₹93.58 ಲಕ್ಷ ವಂಚಿಸಿದ ಬೃಹತ್ ಆನ್ಲೈನ್ ಟ್ರೇಡಿಂಗ್ ಹೂಡಿಕೆ ಜಾಲವನ್ನು ಬೆಂಗಳೂರು ಸೈಬರ್ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಯನಗರ 9ನೇ ಬ್ಲಾಕ್ನಲ್ಲಿ ಚಾಕು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆದ ನಾಲ್ಕೇ ಗಂಟೆಗಳಲ್ಲಿ ತಿಲಕ್ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಜ್ಯದ ಸಾವಿರಾರು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಪರಿಷ್ಕೃತ ಕನಿಷ್ಠ ವೇತನ ಜಾರಿಯನ್ನು ತಡೆಹಿಡಿದಿದ್ದ ಸರ್ಕಾರದ ಸುತ್ತೋಲೆಗಳಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.