
Pulse of the Public
ಕಾಲ್ಪನಿಕ ಚಿತ್ರಚೀನಾದ ಚೆಂಗ್ಡುವಿನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ಷಿಪ್ ನಲ್ಲಿ 15 ವರ್ಷದ ತಾನ್ವಿ ಪತ್ರಿ ತಮ್ಮದೇ ದೇಶದ ಶೈನಾ ಮಣಿಮುತು ಅವರನ್ನು ಮಣಿಸಿ ಯು-17 ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಯೆಟ್ನಾಂನ ಫಾನ್ ಥಿಯೆಟ್ನಲ್ಲಿ ನಡೆದ ಸ್ಪೋರ್ಟ್ಸ್ ಫೆಸ್ಟಿವಲ್ ಚಾಲೆಂಜರ್ ೨೦೨೬ರ ಡಬಲ್ಸ್ ಫೈನಲ್ನಲ್ಲಿ ಭಾರತದ ಪ್ರಜ್ವಲ್ ದೇವ್ ಮತ್ತು ಫ್ರಾನ್ಸ್ನ ಕಾನ್ಸ್ಟಾಂಟಿನ್ ಬಿಟೌನ್ ಕುಜ್ಮೈನ್ ಜೋಡಿ ಜಪಾನ್ನ ಜೋಡಿಯನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ಸೆಪ್ಟೆಂಬರ್ 22 ರಿಂದ ಪುದುಚೇರಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗೆ ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ. ಬಹುದಿನಗಳ ಪಂದ್ಯಗಳಿಗೆ ದೇವದತ್ ಪಡಿಕ್ಕಲ್ ನಾಯಕರಾದರೆ, ಏಕದಿನ ಪಂದ್ಯಗಳಿಗೆ ಋತುರಾಜ್ ಗಾಯಕ್ವಾಡ್ ನಾಯಕತ್ವ ವಹಿಸಲಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮತ್ತು ಫಿಫಾ ಸಹಯೋಗದ ಕೋಚ್ ಎಜುಕೇಟರ್ ಅಭಿವೃದ್ಧಿ ಯೋಜನೆಯ ನಾಲ್ಕು ದಿನಗಳ ಅಂತಿಮ ಮಾಡ್ಯೂಲ್ ಸೆಪ್ಟೆಂಬರ್ 8 ರಂದು ಬೆಂಗಳೂರಿನಲ್ಲಿ ಪೂರ್ಣಗೊಂಡಿದೆ.