
Pulse of the Public
ಕಾಲ್ಪನಿಕ ಚಿತ್ರಬಾಗೇಪಲ್ಲಿ ತಾಲೂಕಿನ ಗಡಿದಂ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್ಎನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ವಿವಾಹದಲ್ಲಿ 106 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಪ್ರತಿಯೊಂದು ನವಜೋಡಿಗೆ ಸೀಮೆ ಹಸು ಹಾಗೂ ನಗದು ನೆರವು ನೀಡಿದರು.
ಸೆಪ್ಟೆಂಬರ್ 5 ರಂದು ಉಡುಪಿಯ ರಥಬೀದಿಯಲ್ಲಿ ನಡೆದ ಪ್ರಸಿದ್ಧ ಶ್ರೀ ಕೃಷ್ಣ ಲೀಲೋತ್ಸವ ಮತ್ತು ವಿಟ್ಲಪಿಂಡಿ ಸಂಭ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸುವರ್ಣ ರಥೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವ ಕಣ್ಣುಂಬಿಕೊಂಡರು.
ಟಿಬೆಟ್ ಮತ್ತು ನೇಪಾಳದ ಗಡಿ ಭಾಗದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಮುಂಡಗೋಡಿನ ಡ್ರೆಪುಂಗ್ ಲೋಸೆಲಿಂಗ್ ಮತ್ತು ಗೇಡನ್ ಶಾರ್ತ್ಸೆ ಮಠಗಳ ಸನ್ಯಾಸಿಗಳ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸನ್ಯಾಸಿಗಳಲ್ಲಿ ಆತಂಕ ಮೂಡಿಸಿದೆ.
ಗುಬ್ಬಿ ಪಟ್ಟಣದ ಸಿಡಿಲು ಬಸವೇಶ್ವರಸ್ವಾಮಿ ಜಾತ್ರೆ ಅಂಗವಾಗಿ ನಡೆದ 'ಪರೇವು' ಕಾರ್ಯಕ್ರಮದಲ್ಲಿ ಧಾರ್ಮಿಕ ಸಮಾರಂಭಗಳು ಭಾವೈಕ್ಯತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತೊರೆಮಠದ ಅಟವಿ ಚන්නಬಸವ ಸ್ವಾಮೀಜಿ ತಿಳಿಸಿದರು.