ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರದ ಬೌದ್ಧ ಸನ್ಯಾಸಿಗಳಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಟಿಬೆಟ್ನ ಗೈರಾಂಗ್ ಕೌಂಟಿ ಹಾಗೂ ನೇಪಾಳದ ರಸುವಾ ಗ್ರಾಮದ ಗಡಿ ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತವು ಮುಂಡಗೋಡಿನ ಮಠಗಳಲ್ಲಿ ಅಧ್ಯಯನ ಮಾಡುತ್ತಿರುವ ಸನ್ಯಾಸಿಗಳ ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
ದಕ್ಷಿಣ ಭಾರತದ ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಮುಖ್ಯ ಪ್ರತಿನಿಧಿ ಜಿಗ್ಮೆ ತ್ಸುಲ್ಟ್ರಿಮ್ ನೀಡಿರುವ ಮಾಹಿತಿಯಂತೆ, ಮುಂಡಗೋಡಿನ ಪ್ರಸಿದ್ಧ ಡ್ರೆಪುಂಗ್ ಲೋಸೆಲಿಂಗ್ ಮಠ ಹಾಗೂ ಗೇಡನ್ ಶಾರ್ತ್ಸೆ ಮಠದ ಹಲವು ಸನ್ಯಾಸಿಗಳ ಕುಟುಂಬಗಳು ಈ ನೈಸರ್ಗಿಕ ವಿಕೋಪಕ್ಕೆ ಸಿಲುಕಿವೆ. ದುರಂತದ ಸುದ್ದಿ ತಲುಪುತ್ತಿದ್ದಂತೆ, ಡ್ರೆಪುಂಗ್ ಲೋಸೆಲಿಂಗ್ ಮಠದ ಮೂವರು ಸನ್ಯಾಸಿಗಳು ತಮ್ಮ ಕುಟುಂಬದವರ ಯೋಗಕ್ಷೇಮ ವಿಚಾರಿಸಲು ಹಾಗೂ ನೆರವಿಗೆ ಧಾವಿಸಲು ಈಗಾಗಲೇ ಸ್ವದೇಶಕ್ಕೆ ತೆರಳಿದ್ದಾರೆ. ಇನ್ನುಳಿದ ಹಲವು ಸನ್ಯಾಸಿಗಳು ತಮ್ಮ ಕುಟುಂಬಸ್ಥರ ಸುರಕ್ಷತೆಯ ಬಗ್ಗೆ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಮುಂಡಗೋಡಿನ ದೋಗುಲಿಂಗ್ ಟಿಬೆಟಿಯನ್ ವಸಾಹತಿನಲ್ಲಿರುವ ಸಾವಿರಾರು ಸನ್ಯಾಸಿಗಳು ಹಾಗೂ ನಿವಾಸಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ತಮ್ಮ ಸಂಬಂಧಿಕರ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಸಂವಹನ ಕೊರತೆಯ ನಡುವೆಯೂ ಮಠದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ಸನ್ಯಾಸಿಗಳಿಗೆ ಅಗತ್ಯ ಬೆಂಬಲ ಮತ್ತು ನೆರವು ನೀಡಲು ಕ್ರಮ ಕೈಗೊಳ್ಳುತ್ತಿವೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಪವಿತ್ರ ಧಾರ್ಮಿಕ ಕ್ಷೇತ್ರ ವರವಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಮೌನೇಶ್ವರ ರಥೋತ್ಸವವು ಸಂಭ್ರಮ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.