
Pulse of the Public
ಕಾಲ್ಪನಿಕ ಚಿತ್ರದೆಹಲಿ ಸಚಿವ ಸಂಪುಟವು 'ದೆಹಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ವಿಧೇಯಕ 2026' ಕ್ಕೆ ಅನುಮೋದನೆ ನೀಡಿದ್ದು, ಉದ್ಯಮಗಳ ಪರವಾನಗಿ, ಅನುಮತಿ ಮತ್ತು ಸಂಪರ್ಕಗಳಿಗೆ ಸುಲಭವಾದ ಆನ್ಲೈನ್ ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಚಯಿಸಿದೆ.
ಅಪಘಾತ ನಿಯಂತ್ರಣ ಹಾಗೂ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ಸೆಪ್ಟೆಂಬರ್ 4 ರಿಂದ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ದ್ವಿಚಕ್ರ ವಾಹನ ನಿಷೇಧ ಹಾಗೂ ಹೊಸ ಸಂಚಾರ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ವಿರೋಧಿಸಿ ಮೈಸೂರಿನ ಚೆಲುವಾಂಬ ಪಾರ್ಕ್ನಲ್ಲಿ ನಾಗರಿಕರು ಹಾಗೂ ಪರಿಸರಾಸಕ್ತರು ಬೃಹತ್ ಪ್ರತಿಭಟನೆ ನಡೆಸಿದರು. ಉದ್ಯಾನವನಗಳ ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣಕ್ಕೆ ಬಳಕೆ ಮಾಡಲು ಅವಕಾಶ ನೀಡಿದರೆ ನಗರದ ಹಸಿರು ವಲಯ ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಶೇಕಡಾ 57 ರಿಂದ 74 ರಷ್ಟು ತೀವ್ರ ಮಳೆ ಕೊರತೆಯಾಗಿದ್ದು, ತಕ್ಷಣವೇ ಬರ ಪೀಡಿತ ಪ್ರದೇಶ ಘೋಷಿಸಲು ಎನ್ಡಿಆರ್ಎಫ್ ನಿಯಮಗಳನ್ನು ಸಡಿಲಗೊಳಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.