
Pulse of the Public
ಸೋಮವಾರಪೇಟೆ ತಾಲೂಕಿನ ಕುಂಬೂರು ಗ್ರಾಮದಲ್ಲಿ ಸರ್ಕಾರಿ ಜಮೀನು ಹಕ್ಕುಪತ್ರಕ್ಕಾಗಿ ಆಗ್ರಹಿಸಿ ದಿನಗೂಲಿ ಕಾರ್ಮಿಕರ ಕುಟುಂಬಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತತ ಮಳೆಯ ನಡುವೆಯೂ 100 ದಿನಗಳನ್ನು ಪೂರೈಸಿದೆ.
ಕಮಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ 'ಪ್ರಜಾಸೇವೆ' ಆಂದೋಲನ ಸಭೆ ಆಯೋಜಿಸಲಾಗಿದ್ದು, ಸಾರ್ವಜನಿಕರ ಅರ್ಜಿ ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸಲಾಯಿತು.
ಚಿಂಚೋಳಿ ತಾಲೂಕಿನ ಕುಂಚಾವರಂ ಮಾರುಕಟ್ಟೆಯಲ್ಲಿ ಗಬ್ಬೆದ್ದು ನಾರುತ್ತಿದ್ದ ತ್ಯಾಜ್ಯದ ಕುರಿತು ವರದಿ ಪ್ರಕಟವಾದ ಬೆನ್ನಲ್ಲೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾರುಕಟ್ಟೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.
ವಿಶೇಷ ಸಾಂದ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಲ್ಲಿ ಹೆಸರು ವ್ಯತ್ಯಾಸವಾಗಿದ್ದರಿಂದ ಉಳ್ಳಾಲ ತಾಲೂಕಿನ ಪದ್ಮಶ್ರೀ ಪುರಸ್ಕೃತ ಹರೇಖಳ ಹಜಬ್ಬ ಅವರಿಗೆ ನೀಡಲಾಗಿದ್ದ ನೋಟಿಸ್ ಅನ್ನು ಚುನಾವಣಾಧಿಕಾರಿಗಳು ಹಿಂಪಡೆದಿದ್ದಾರೆ. ಹರೇಖಳ ಗ್ರಾಮದಲ್ಲಿರುವ ಹಜಬ್ಬ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಪಟ್ಟಿಯಲ್ಲಿ ತಿದ್ದುಪಡಿ ಮಾಡಿದ್ದಾರೆ.