ಮಳೆಯ ಕೊರತೆ: ಸೆಪ್ಟೆಂಬರ್ನಲ್ಲಿ ದಶಕದಲ್ಲೇ ಗರಿಷ್ಠ ತಾಪಮಾನ ದಾಖಲಿಸಿದ ಬೆಂಗಳೂರು
ಶನಿವಾರ ಬೆಂಗಳೂರಿನಲ್ಲಿ ಗರಿಷ್ಠ ೩೨.೬ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ ಒಂದು ದಶಕದಲ್ಲೇ ಸೆಪ್ಟೆಂಬರ್ ತಿಂಗಳ ಅತಿ ಹೆಚ್ಚು ಉಷ್ಣಾಂಶವಾಗಿದೆ. ಮಳೆಯ ಅಭಾವ, ಮೋಡವಿಲ್ಲದ ಆಕಾಶ ಮತ್ತು ಒಣ ಹವಾಮಾನವೇ ಈ ತಾಪಮಾನ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.
