ಅಸಹ್ಯಕರ ಅಡುಗೆ ಮನೆ, 40 ಕೆಜಿ ಅವಧಿ ಮೀರಿದ ಖಾರ: ಬೆಂಗಳೂರಿನ ಚೇರ್ಮನ್ಸ್ ಕ್ಲಬ್ ಕಿಚನ್ ಸೀಲ್
ಬೆಂಗಳೂರಿನ ಸಹಕಾರನಗರದಲ್ಲಿರುವ ಚೇರ್ಮನ್ಸ್ ಕ್ಲಬ್ನ ಅಡುಗೆ ಮನೆಯನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು, 40 ಕೆಜಿ ಅವಧಿ ಮೀರಿದ ಖಾರದ ಪುಡಿ ಹಾಗೂ ನೈರ್ಮಲ್ಯದ ತೀವ್ರ ಕೊರತೆ ಪತ್ತೆಯಾದ ಹಿನ್ನೆಲೆಯಲ್ಲಿ ಕಿಚನ್ ಅನ್ನು ಸೀಲ್ ಮಾಡಿದ್ದಾರೆ.
