
Pulse of the Public
ಕಾಲ್ಪನಿಕ ಚಿತ್ರನ್ಯೂ ಪನ್ವೇಲ್ನಲ್ಲಿ ಕಟ್ಟಡ ಮರುಅಭಿವೃದ್ಧಿ ಯೋಜನೆಗೆ ನಿರಾಕ್ಷೇಪಣಾ ಪತ್ರ ನೀಡಲು ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಿಜಿಎಸ್ಟಿ ಸೂಪರಿಂಟೆಂಡೆಂಟ್ ಹಾಗೂ ಸಲಹೆಗಾರನನ್ನು ಸಿಬಿಐ ಬಂಧಿಸಿದೆ.
ದೇಶದ ವಿರುದ್ಧ ಯುದ್ಧ ಸಾರಲು ಸಂಚು ರೂಪಿಸಿದ್ದ ಇಬ್ಬರು ಉಗ್ರರ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಕಡಿತಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ತಪ್ಪು ಒಪ್ಪಿಕೊಂಡ ಮಾತ್ರಕ್ಕೆ ಕನಿಷ್ಠ ಶಿಕ್ಷೆಗೆ ಹಕ್ಕು ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಅಮಾನತುಗೊಂಡ ಅಧ್ಯಕ್ಷ ಸಾಹುಕಾರ್ ಎಸ್. ಶಿವಶಂಕರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಪ್ರಕರಣವನ್ನು 'ವ್ಯವಸ್ಥಿತ ವಂಚನೆ' ಎಂದು ಕರೆದಿರುವ ಕೋರ್ಟ್, ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ಸಾರ್ವಜನಿಕರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಓಝೋನ್ ಗ್ರೂಪ್ ಮತ್ತು ವಿವಾನ್ಸಾ ಸಂಸ್ಥೆಗಳ ವಿರುದ್ಧ ಸಿಬಿಐ 5 ನೂತನ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಗಳೂರು ಸೇರಿ 12 ಸ್ಥಳಗಳಲ್ಲಿ ದಾಳಿ ನಡೆಸಿದೆ.