
Pulse of the Public
ಕಾಲ್ಪನಿಕ ಚಿತ್ರತನಿಖಾ ವರದಿಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಪತ್ರಕರ್ತ ಜಿ. ಮಹಾಂ his ತೇಶ್ಗೆ ನಿಂದನಾತ್ಮಕ ಕರೆ ಹಾಗೂ ಜೀವ ಬೆದರಿಕೆ ಬಂದ ದೂರಿನನ್ವಯ, ನ್ಯಾಯಾಲಯದ ನಿರ್ದೇಶನದಂತೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹತ್ತು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಹರ್ನೇಕ್ ಸಿಂಗ್ ಎಂಬ ಆರೋಪಿಯನ್ನು ಅಮೆರಿಕದಿಂದ ಗಡಿಪಾರು ಮಾಡಿದ ನಂತರ ಸಿಬಿಐ ಬಂಧಿಸಿದೆ. ಸಿಂಗಾಪುರದಲ್ಲಿದ್ದ ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆಸಿದ ಸೈಬರ್ ವಂಚನೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದನು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪೂರೈಸಿದ ಆರೋಪದ ಮೇಲೆ ಜೈಲು ವಾರ್ಡರ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ದೇಶದ 20 ರಾಜ್ಯಗಳ 89 ಸ್ಥಳಗಳಲ್ಲಿ 'ಆಪರೇಷನ್ ಚಕ್ರ-6' ಅಡಿಯಲ್ಲಿ ಬೃಹತ್ ದಾಳಿ ನಡೆಸಿದ ಸಿಬಿಐ, 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಸೈಬರ್ ಅಪರಾಧ ಜಾಲದ ಮೂವರು ಪ್ರಮುಖರನ್ನು ಬಂಧಿಸಿದೆ.