ಸಬ್ಸಿಡಿ ದರದ ಪಿಜಿ ವೈದ್ಯಕೀಯ ಶಿಕ್ಷಣ ಪಡೆದ ವೈದ್ಯರು ಸರಕಾರಿ ಸೇವಾ ಬಾಂಡ್ನಿಂದ ನುಣುಚಿಕೊಳ್ಳುವಂತಿಲ್ಲ: ಅಲಹಾಬಾದ್ ಹೈಕೋರ್ಟ್
ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಬ್ಸಿಡಿ ದರದಲ್ಲಿ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಶಿಕ್ಷಣ ಪಡೆದ ವೈದ್ಯರು ಕಡ್ಡಾಯ ಸರಕಾರಿ ಸೇವಾ ಬಾಂಡ್ನಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯೋಜನೆ ನೀಡುವಲ್ಲಿ ಆಡಳಿತಾತ್ಮಕ ವಿಳಂಬವಾದರೂ ವೈದ್ಯರ ಬಾಂಡ್ ಹೊಣೆಗಾರಿಕೆ ರದ್ದಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

