
Pulse of the Public
ಕಾಲ್ಪನಿಕ ಚಿತ್ರ2026ರ ಹಿರಿಯರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪಟು ವಿನೇಶ್ ಫೋಗಾಟ್ಗೆ ಮಧ್ಯಂತರ ಅನುಮತಿ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಕುಸ್ತಿ ಮಹಾಸಂಘದ ನಿಯಮಗಳು ಎಲ್ಲಾ ಕ್ರೀಡಾಪಟುಗಳಿಗೆ ಸಮಾನವಾಗಿ ಅನ್ವಯಿಸುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.
ತಾಷ್ಕೆಂಟ್ನಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದ ಜಯ ಗಳಿಸುವ ಮೂಲಕ ಭಾರತದ ಯು-20 ಫುಟ್ಬಾಲ್ ತಂಡವು ಎಎಫ್ಸಿ ಯು-20 ಏಷ್ಯನ್ ಕಪ್ 2027 ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಭಾರತ ತಂಡದಿಂದ ಹೊರಬಿದ್ದ ವೇಗಿ ಹರ್ಷಿತ್ ರಾಣಾ ಅವರ ಜಾಗಕ್ಕೆ ವಿದರ್ಭದ ವೇಗಿ ಯಶ್ ಠಾಕೂರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ದೀರ್ಘಾವಧಿಯ ಗಾಯದ ಬಳಿಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗಾಗಿ ಇಂಡಿಯಾ ಎ ಏಕದಿನ ತಂಡಕ್ಕೆ ಮರಳಿದ್ದಾರೆ. ರುತುರಾಜ್ ಗಾಯಕ್ವಾಡ್ ಏಕದಿನ ತಂಡವನ್ನು ಮುನ್ನಡೆಸಲಿದ್ದರೆ, ದೇವದತ್ ಪಡಿಕ್ಕಲ್ ನಾಲ್ಕು ದಿನಗಳ ಪಂದ್ಯಗಳ ತಂಡದ ನಾಯಕರಾಗಲಿದ್ದಾರೆ.