
Pulse of the Public
ಕಾಲ್ಪನಿಕ ಚಿತ್ರರಾಜ್ಯಾದ್ಯಂತ ನಾಲ್ಕು ದಿನಗಳ ಕಾಲ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಕರ್ನಾಟಕ ಪೊಲೀಸರು ಕಾನೂನುಬಾಹಿರವಾಗಿ ದುಡಿಯುತ್ತಿದ್ದ 800 ಮಕ್ಕಳನ್ನು ರಕ್ಷಿಸಿದ್ದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ನಗರ ಪೊಲೀಸರು ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ, ₹24.22 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನ್ಯೂ ಪನ್ವೇಲ್ನಲ್ಲಿ ಕಟ್ಟಡ ಮರುಅಭಿವೃದ್ಧಿ ಯೋಜನೆಗೆ ನಿರಾಕ್ಷೇಪಣಾ ಪತ್ರ ನೀಡಲು ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಿಜಿಎಸ್ಟಿ ಸೂಪರಿಂಟೆಂಡೆಂಟ್ ಹಾಗೂ ಸಲಹೆಗಾರನನ್ನು ಸಿಬಿಐ ಬಂಧಿಸಿದೆ.
ದೇಶದ ವಿರುದ್ಧ ಯುದ್ಧ ಸಾರಲು ಸಂಚು ರೂಪಿಸಿದ್ದ ಇಬ್ಬರು ಉಗ್ರರ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಕಡಿತಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ತಪ್ಪು ಒಪ್ಪಿಕೊಂಡ ಮಾತ್ರಕ್ಕೆ ಕನಿಷ್ಠ ಶಿಕ್ಷೆಗೆ ಹಕ್ಕು ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.