ಐಐಟಿ ಮದ್ರಾಸ್ನ 'ಸ್ಕೂಲ್ ಕನೆಕ್ಟ್' ಕಾರ್ಯಕ್ರಮದ ಹೊಸ ನೋಂದಣಿ ಆರಂಭ: 9ನೇ ತರಗತಿ ವಿದ್ಯಾರ್ಥಿಗಳಿಗೂ ಅವಕಾಶ
ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್ ಮತ್ತು ಕಾನೂನು ಸೇರಿದಂತೆ 17 ಪ್ರಮುಖ ಕ್ಷೇತ್ರಗಳಲ್ಲಿ ಆನ್ಲೈನ್ ಕೋರ್ಸ್ ನೀಡುವ ಐಐಟಿ ಮದ್ರಾಸ್ನ 'ಸ್ಕೂಲ್ ಕನೆಕ್ಟ್' ಕಾರ್ಯಕ್ರಮದ ಅಕ್ಟೋಬರ್ ಬ್ಯಾಚ್ಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಬಾರಿಗೆ 9ನೇ ತರಗತಿಯ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ.
