
Pulse of the Public
ಕಾಲ್ಪನಿಕ ಚಿತ್ರಮುಂಬರುವ ಕಂಬಳ ಋತುವಿಗಾಗಿ ಯುವಕರನ್ನು ತರಬೇತುಗೊಳಿಸಲು ಸೆಪ್ಟೆಂಬರ್ 16ರಿಂದ ಕಾರ್ಕಳದಲ್ಲಿ 10 ದಿನಗಳ ರಾಜ್ಯ ಮಟ್ಟದ ಕಂಬಳ ಓಟಗಾರರ ತರಬೇತಿ ಶಿಬಿರ ನಡೆಯಲಿದೆ.
ಹುಣಸೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ಸಂತ ಜೋಸೆಫರ ಪಿಯು ಕಾಲೇಜಿನ ಬಾಲಕಿಯರ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ-2026ಕ್ಕೆ ಶಾಸಕ ಅವಿನಾಶ್ ಜಾಧವ್ ಚಾಲನೆ ನೀಡಿ, ಕ್ರೀಡಾಂಗಣ ಅಭಿವೃದ್ಧಿಗೆ ಕೆಕೆಆರ್ಡಿಬಿ ಅನುದಾನ ತರುವುದಾಗಿ ಭರವಸೆ ನೀಡಿದರು.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಎಚ್. ಹೊನ್ನೇನಹಳ್ಳಿ ಗ್ರಾಮದ ಯುವ ಹಾಕಿ ಕ್ರೀಡಾಪಟು ಎಚ್.ಎಸ್. ಮೋಹಿತ್, ೨೦೨೬ರ ಎಫ್ಐಎಚ್ ವಿಶ್ವಕಪ್ಗೆ ಭಾರತೀಯ ಸೀನಿಯರ್ ತಂಡದ ಗೋಲ್ಕೀಪರ್ ಆಗಿ ಆಯ್ಕೆಯಾಗುವ ಮೂಲಕ ತಾಲೂಕು ಹಾಗೂ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.