₹50 ಲಕ್ಷ ಲಂಚ ಪ್ರಕರಣ: ಧಾರವಾಡ ತಹಶೀಲ್ದಾರ್ ನ್ಯಾಯಾಂಗ ಬಂಧನಕ್ಕೆ
ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕಚನೂರ್ ಅವರನ್ನು ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಯೇರಿಕೊಪ್ಪ ಗ್ರಾಮದಲ್ಲಿ 33 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅವರು ಒಟ್ಟು ₹1 ಕೋಟಿ ಲಂಚ ಕೇಳಿದ್ದರೆನ್ನಲಾಗಿದೆ.
