ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣ: ಷರತ್ತಿಲ್ಲದ ಕ್ಷಮೆಯಾಚನೆ ಸ್ವೀಕರಿಸಿದ ಹೈಕೋರ್ಟ್, 1,000 ಸಸಿ ನೆಡುವಂತೆ ವಕೀಲರಿಗೆ ಸೂಚನೆ
ಕೊಪ್ಪಳ ಜಿಲ್ಲೆಯ ಗಂಗಾವತಿ ನ್ಯಾಯಾಲಯದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ವಕೀಲರ ಷರತ್ತಿಲ್ಲದ ಕ್ಷಮೆಯಾಚನೆಯನ್ನು ಅಂಗೀಕರಿಸಿದ ಕರ್ನಾಟಕ ಹೈಕೋರ್ಟ್, ಅವಮಾನ ಪ್ರಕ್ರಿಯೆಯನ್ನು ಹಿಂಪಡೆದು ₹1,000 ದಂಡ ಮತ್ತು 1,000 ಹಣ್ಣಿನ ಸಸಿಗಳನ್ನು ನೆಡುವಂತೆ ಆದೇಶಿಸಿದೆ.
