ಕುರುಗೋಡು ತಾಲೂಕಿನ ಕೋಳೂರಿನಲ್ಲಿ 'ಪ್ರಜಾ ಸೇವಾ ಆಂದೋಲನ': ಸಾರ್ವಜನಿಕ ಕುಂದುಕೊರತೆ ಸಭೆ
ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿ ತಾಲೂಕು ಆಡಳಿತದಿಂದ 'ಪ್ರಜಾ ಸೇವಾ ಆಂದೋಲನ' ಕುಂದುಕೊರತೆ ಸಭೆ ಜರುಗಿದ್ದು, ಸಾರ್ವಜನಿಕರ ಅರ್ಜಿಗಳನ್ನು ಆಲಿಸಿ ಸ್ಥಳದಲ್ಲೇ ಸೌಲಭ್ಯ ಒದಗಿಸಲಾಯಿತು.

Pulse of the Public
ಕಂಪ್ಲಿ ತಾಲೂಕಿನಲ್ಲಿ ಅಧಿಕಾರಿಗಳ ಜಂಟಿ ತಂಡ ನಡೆಸಿದ ದಿಢೀರ್ ಪರಿಶೀಲನೆ ವೇಳೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ಐವರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಪುನರ್ವಸತಿ ಮತ್ತು ಮುಂದಿನ ಕಾನೂನು ಕ್ರಮಕ್ಕಾಗಿ ಬಾಲ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಆರಂಭಿಕ ನಿರಾಕರಣೆಯ ನಂತರ, ಬಳ್ಳಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಿಜೆಪಿ 'ಬಳ್ಳಾರಿ ಚಲೋ' ಸಮಾವೇಶ ನಡೆಸಲು ಬಳ್ಳಾರಿ ಜಿಲ್ಲಾಡಳಿತ ಶರತ್ತುಬದ್ಧ ಅನುಮತಿ ನೀಡಿದೆ.
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಶ್ರೀನಂದಿ ಶಾಲೆಯ ಅಂಗಳದಲ್ಲಿ ಗ್ರಾಮಾಂತರ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕುಸುಮ) ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ 22 ಶಾಲೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.
ಸಂಡೂರು ಕ್ಷೇತ್ರದ 90 ಗ್ರಾಮಗಳ ಜನರಿಗೆ ಮನೆ ಬಾಗಿಲಲ್ಲೇ ವೈದ್ಯಕೀಯ ಸೇವೆ ಒದಗಿಸಲು JSW CSR ನೆರವಿನ ಮೂರು ಮೊಬೈಲ್ ಹೆಲ್ತ್ ಯೂನಿಟ್ಗಳಿಗೆ ಶಾಸಕಿ ಅನ್ನಪೂರ್ಣ ತುಕಾರಾಮ್ ಚಾಲನೆ ನೀಡಿದರು.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿ ತಾಲೂಕು ಆಡಳಿತದಿಂದ 'ಪ್ರಜಾ ಸೇವಾ ಆಂದೋಲನ' ಕುಂದುಕೊರತೆ ಸಭೆ ಜರುಗಿದ್ದು, ಸಾರ್ವಜನಿಕರ ಅರ್ಜಿಗಳನ್ನು ಆಲಿಸಿ ಸ್ಥಳದಲ್ಲೇ ಸೌಲಭ್ಯ ಒದಗಿಸಲಾಯಿತು.
ಕಂಪ್ಲಿ ತಾಲೂಕಿನ ಮಣ್ಣೂರು ಹಾಗೂ ಎಂ. ಸೂಗೂರು ನದಿ ಪಾತ್ರದಲ್ಲಿ 65 ಎಕರೆ ಮರಳು ಗಣಿಗಾರಿಕೆಗೆ ಪರಿಸರ ಅನುಮತಿ ನೀಡಬಾರದು ಎಂದು ಸಾರ್ವಜನಿಕರು ಅಪರ ಜಿಲ್ಲಾಧಿಕಾರಿಗಳಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು.
ಸೆಷನ್ಸ್ ನ್ಯಾಯಾಧೀಶರ ಮುಂದೆ ದುರ್ವರ್ತನೆ ತೋರಿದ ಪ್ರಕರಣದಲ್ಲಿ ಬಳ್ಳಾರಿಯ ವಕೀಲ ಎಸ್. ರಂಗಸ್ವಾಮಿ ಅವರ ಬೇಷರತ್ ಕ್ಷಮಾಪಣೆಯನ್ನು ಸ್ವೀಕರಿಸಿರುವ ಕರ್ನಾಟಕ ಹೈಕೋರ್ಟ್, ಬಳ್ಳಾರಿಯಲ್ಲಿ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ವಿನೂತನ ಆದೇಶ ನೀಡಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ೪ನೇ ವಾರ್ಡ್ ನಿವಾಸಿಗಳು ಕುಡಿಯುವ ನೀರಿನ ಅಭಾವವನ್ನು ಖಂಡಿಸಿ ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು. ನೀರು ಪೂರೈಸುವ ಭರವಸೆ ಈಡೇರಿಸದ ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ದಿನಪತ್ರಿಕೆ ಮಾರಾಟಗಾರರ ದಿನಾಚರಣೆಯ ಹಿನ್ನೆಲೆಯಲ್ಲಿ, ಬಳ್ಳಾರಿ ನಗರದ ವೀರೇಶ್ ಜನರಲ್ ಸ್ಟೋರ್ನಲ್ಲಿರುವ ಸ್ವಯಂ ಸೇವಾ ದಿನಪತ್ರಿಕೆ ಕೌಂಟರ್ ಕಳೆದ ಐದು ದಶಕಗಳಿಂದ ಯಾವುದೇ ಮೇಲ್ವಿಚಾರಣೆ ಇಲ್ಲದೆ ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಂಪ್ಲಿ ತಾಲೂಕಿನ ಎಮ್ಮಿಗನೂರಿನಿಂದ ಪಟ್ಟಣದ ನೀರಾವರಿ ಇಲಾಖೆ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಿ, ಎಲ್ಎಲ್ಸಿ ಕಾಲುವೆಯ ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ತೀವ್ರ ಪ್ರತಿಭಟನೆ ನಡೆಸಿದರು.
ಸಿರಗುಪ್ಪ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ತುಂಗಭದ್ರಾ ನದಿಗೆ ನೀರು ಹರಿಸಬೇಕು ಮತ್ತು ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಸಿರಗುಪ್ಪ ತಾಲೂಕು ಪಂಚಾಯಿತಿ ಆವರಣದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.