ಪತ್ನಿ ಕೊಲೆ ಪ್ರಕರಣ: ಮೈಸೂರಿನ ಅಪರಾಧಿಯ ಮರಣದಂಡನೆ ತಡೆಗೆ ಹೈಕೋರ್ಟ್ ನಿರಾಕರಣೆ
ಮೈಸೂರಿನಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆ ತಡೆ ಮತ್ತು ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಬಲವಾದ ಸಾಕ್ಷ್ಯಗಳು ಇರುವುದನ್ನು ಪೀಠ ಗಮನಿಸಿದೆ.
